ಕವಿ  ಚಕ್ರವರ್ತಿ – ಜನ್ನ

ಕವಿ  ಚಕ್ರವರ್ತಿ  ಬಿರುದಾಂಕಿತನಾದ ಮಹಾಕವಿ ಜನ್ನನು ಕರ್ನಾಟಕದಲ್ಲಿದ್ದ, ಹಳಗನ್ನಡ ಕವಿ. ಕಾಲ ಕ್ರಿ.ಶ.೧೧೮೦-೧೨೬೦.ತಂದೆ ಶಂಕರನು ಹೊಯ್ಸಳ ನರಸಿಂಹನಲ್ಲಿ ದಂಡಾಧೀಶನಾಗಿದ್ದನು.  ತಾಯಿ ಗಂಗಾದೇವಿ. ಕನ್ನಡದ ಬಹುಮುಖ್ಯ ಕಾವ್ಯಸಂಕಲನ ಗ್ರಂಥವಾದ ಸೂಕ್ತಿಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನನಿಗೆ ಜನ್ನನ ತಂಗಿಯನ್ನು ಕೊಟ್ಟು ಮದುವೆಮಾಡಲಾಗಿತ್ತು. ಶಬ್ದಮಣಿದರ್ಪಣವನ್ನು ರಚಿಸಿದ ವಯ್ಯಾಕರಣಿ ಕೇಶಿರಾಜನು ಜನ್ನನ ಸೋದರಳಿಯ. ಈತನು ಹೊಯ್ಸಳ ವೀರಬಲ್ಲಾಳನ ಮಹಾಮಂತ್ರಿಯೂ, ಸೈನ್ಯಾಧಿಪತಿಯೂ, ಆಸ್ಥಾನಕವಿಯೂ ಆಗಿದ್ದನು. ವೀರಬಲ್ಲಾಳನ ನಂತರ ಪಟ್ಟಕ್ಕೆ ಬಂದ ೨ನೆಯ ನರಸಿಂಹನ ಕಾಲದಲ್ಲೂ ಜನ್ನನು ಆಸ್ಥಾನ ಕವಿಯಾಗಿ ಮುಂದುವರಿದನು. ಜೈನ ಮತೀಯನಾದರೂ, ಅವನ ಸಾಹಿತ್ಯ ಕೃಷಿ, ಸರ್ವಪ್ರಕಾರಗಳನ್ನು ವ್ಯಾಪಿಸಿತ್ತು. ಜನ್ನನು ಸಿಂದಗಿ ತಾಲೂಕಿನ ಕೊಂಡಗೂಳಿಯಲ್ಲಿ ಹುಟ್ಟಿ, ಹಳೆಯಬೀಡಿನಲ್ಲಿರುವ ವಿಜಯ ಪಾರ್ಶ್ವನಾಥ ದೇವಾಲಯದ ಮುಖಭಾಗದಲ್ಲಿ ಸೊಗಸಾದ ಮುಖಮಂಟಪವನ್ನು ಕಟ್ಟಿಸಿ, ಅಲ್ಲಿ ತನ್ನ ಕಾವ್ಯ ಅನಂತನಾಥಪುರಾಣದ ೧,೦೦೦, ತಾಳೆಗರಿಗಳ ಪ್ರತಿಗಳನ್ನು ಬರೆಸಿ,ಉದಾರ ಸಂಭಾವನೆಯೊಂದಿಗೆ ವಿದ್ವಾಂಸರಿಗೆ ಕೊಟ್ಟು, ಗೌರವಿಸಿದನೆಂದು ತಿಳಿದುಬರುತ್ತದೆ. ಬಾಲಕರಗಣದ ಮೇಘನಂದಿ ಸಿದ್ಧಾಂತಿದೇವರು ಜನ್ನನ ಆಧ್ಯಾತ್ಮಿಕ ಗುರು ಮಕಾಶಿಗಳಾಗಿದ್ದರು. ಜನ್ನನ ರಚನೆಗಳು- ೧.ಜನ್ನನು ಕ್ರಿ.ಶ.೧೨೦೯ರಲ್ಲಿ ಯಶೋಧರ ಚರಿತ್ರೆಯನ್ನು ರಚಿಸಿದನು. ೨.ಜನ್ನನ ಎರಡನೆಯ ರಚನೆ ಅನಂತನಾಥ ಪುರಾಣ ಜೈನರ ೧೪ನೆಯ ತೀರ್ಥಂಕರನಾದ ಅನಂತನಾಥಸ್ವಾಮಿಯ ಜೀವನಚರಿತ್ರೆಯನ್ನು ಕುರಿತದ್ದು.

Author

Leave a Reply

Your email address will not be published. Required fields are marked *